ಮನಸು ಮೌನವಾದಾಗ
ಮಾತು ಬಾರದಾದಾಗ
ಮಾನ ಹೋಗುವಂತಿರುವಾಗ
ಸಿಗುವ ಮುತ್ತಿನಂಥ ಮಾತೇ ಸ್ನೇಹ.
ಗೆದ್ದಾಗ ಗಮನಿಸುವ
ಸೋತಾಗ ಸಂತೈಸುವ
ಸತ್ತಾಗ ಸ್ಮರಿಸುವ
ಆ ಜೀವದ ಹೃದಯವೇ ಸ್ನೇಹ.
ಭಾವನೆಯಲ್ಲಿನ ಭವ್ಯತೆಯನ್ನ
ಕಣ್ಣುಗಳಲ್ಲಿನ ಕನಸುಗಳನ್ನ
ಕನಸುಗಳಲ್ಲಿನ ಕವನಗಳನ್ನ
ಬರೆಯಲು ಸಿಗುವ ಸ್ಪೂರ್ತಿಯೇ ಸ್ನೇಹ.
ಸಾಧನೆ ಮಾಡಲು ಸೇತುವೆಯನ್ನ
ಸಮಸ್ಯೆ ಬಂದಾಗ ಸಹಕಾರವನ್ನ
ಸಿಟ್ಟು ಬಂದಾಗ ಸಂಯಮವನ್ನ
ತೋರಿಸುವ ಕೈಗಳೇ ಸ್ನೇಹ.
ಸುಮ್ ಸುಮ್ನೆ ಸಡಿಲವಾಗದ
ಚಂಗ್ ಚಂಗನೆ ಬಂದು ಹೋಗದ
ನಿಶ್ಚಲವಾದ, ಅಚಲವಾದ, ಶುಭ್ರವಾದ
ಈ ನಮ್ಮ ಬಾಂಧವ್ಯವೇ ಸ್ನೇಹ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಸ್ನೇಹದ ಬಗ್ಗೆ ಅರ್ಥಪೂರ್ಣ ಕವನ. ಇನ್ನಷ್ಟು ಚೆನ್ನಾಗ್ ಬರೆಯಬಹುದು. ಕವನದ ಬಗ್ಗೆ ಅಷ್ಟೇನೂ ತಿಳಿದಿಲ್ಲ. ಇನ್ನಷ್ಟು ಬರೆಯಿರಿ. ಶುಭವಾಗಲಿ...
ಪ್ರತ್ಯುತ್ತರಅಳಿಸಿನಮ್ಮೆಲ್ಲಾ ದೌರ್ಬಲ್ಯ , ನ್ಯೂನತೆಗಳೊಂದಿಗೆ ನಮ್ಮನ್ನು ಆದರಿಸುವವರು, ಪ್ರೀತಿಸುವವರು, ತಪ್ಪನ್ನು ತಿದ್ದೋರೇ ನಿಜವಾದ ಸ್ನೇಹಿತರು ಅಲ್ವಾ?
-ಚಿತ್ರಾ
ತುಂಬ ಧನ್ಯವಾದಗಳು ನಿಮಗೆ. ನನ್ನ ಬ್ಲಾಗ್ ನೋಡಿ ನನ್ನ ಸರಿ ತಪ್ಪುಗಳನ್ನ ಓದಿ ಹೇಳಿದ್ದಕ್ಕೆ. ನಿಮಗೆ ಸದಾ ಸ್ವಾಗತ.
ಪ್ರತ್ಯುತ್ತರಅಳಿಸಿ