ಮುಂಜಾನೆ ಹೊತ್ತಲ್ಲಿ
ಮುಂಜಾನೆ ಹೊತ್ತಲ್ಲಿ ನೀನೂ...
ಗರಿಕೆ ಮೇಲಿನ ಮಂಜು.
ಗರಿಕೆ ನಾನಾಗಲೆ ನಿಂಗೇ....
ಶಿರ ಏರಿ ಕೂರೇ ನೀ ಇಬ್ಬನಿ ಹಂಗೆ.
ಇಬ್ಬನಿಯ ಶುಭ್ರತೆ ನೀನೂ ಕಣೆ...
ಗರಿಕೆಯ ಭದ್ರತೆ ನಾನಾಗಲೇ.
ಇಬ್ಬನಿಯ ಹೊಳಪು ನೀನೂ ಕಣೆ....
ಗರಿಕೆಯ ಮೊನಚೂ ನಾನಾಗಲೇ.
ಮುಂಜಾನೆ ಹೊತ್ತಲ್ಲಿ ನೀನೂ...
ಗರಿಕೆ ಮೇಲಿನ ಮಂಜು.
ಗರಿಕೆ ನಾನಾಗಲೆ ನಿಂಗೇ....
ಶಿರ ಏರಿ ಕೂರೇ ನೀ ಇಬ್ಬನಿ ಹಂಗೆ.
ಕುಂಚದೂರಿನ ಯಾನ...
ಕೊಂಚ ದೂರದ ಪಯಣ.
ಬಿಸಿಲು ಬೀಳುವ ಮುನ್ನಾ...
ಬೆರೆತು ಬೆವರಾಗುವ ಚಿನ್ನಾ.
ಮುಂಜಾನೆ ಹೊತ್ತಲ್ಲಿ ನೀನೂ...
ಗರಿಕೆ ಮೇಲಿನ ಮಂಜು.
ಗರಿಕೆ ನಾನಾಗಲೆ ನಿಂಗೇ....
ಶಿರಏರಿ ಕೂರೇ ನೀ ಇಬ್ಬನಿ ಹಂಗೆ.
